"ಮದುವೆ ಎಂಬ ಕಬ್ಬಿಣದ ಕಡಲೆ"

"ಮದುವೆ ಎಂಬ ಕಬ್ಬಿಣದ ಕಡಲೆ"


ಕಾರ್ತಿಕ್ ನಾಯಕ್


ಹಿರಿಯರು ಯಾವತ್ತೂ ಒಂದು ಮಾತು ಹೇಳುತ್ತಾರೆ. "ಒಂದು ಮನೆ ಕಟ್ಟಿ ನೋಡು ಒಂದು ಮದುವೆ ಮಾಡಿ ನೋಡು" ಈ ಮಾತು ಇಂದಿಗೂ ಪ್ರಸ್ತುತ. ಏಕೆಂದರೆ ಇವೆರಡು ಕೆಲಸ ಮಾಡಿ ಮುಗಿಸುವುದು ಕಷ್ಟವೇ ಸರಿ. ಅದರಲ್ಲೂ ಒಂದು ಮದುವೆ ಮಾಡುವುದು ಅಂದರೆ ಸುಲಭದ ತುತ್ತಲ್ಲ. ಮನೆಯಲ್ಲಿ ಒಂದು ಹೆಣ್ಣು ಮಗು ಹುಟ್ಟಿದರೆ ಸಾಕು ಅದೆಷ್ಟೋ ಹೆತ್ತವರು ಅಯ್ಯೋ ದೇವರೇ ಯಾಕಾದ್ರು ಹೆಣ್ಣು ಮಗು ಹುಟ್ಟಿತೋ? ಎಂಬ ಭಾವನೆ ಮೂಡುತ್ತದೆ. ಹಾಗೆ ಯೋಚಿಸುವುದು ತಪ್ಪು ಅಂತ ಎಲ್ಲರೂ ಒಂದು ಕ್ಷಣಕ್ಕೆ ಅಲೋಚಿಸಿದರೂ ಮತ್ತೊಂದು ಕ್ಷಣಕ್ಕೆ ನಿಜ ಎಂದು ಭಾಸವಾಗುವುದು ಸುಳ್ಳಲ್ಲ. ಈ ಲೇಖನದ ಕೊನೆಯಲ್ಲಿ ನಿಮಗೂ ನನ್ನ ಮಾತು ಸರಿ ಅನ್ನಿಸಬಹುದು.

ಹೆತ್ತವರಿಗೆ ಮನದಲ್ಲಿ ಮೂಡುವ ಪ್ರಶ್ನೆ ಹೇಗೆ ಮದುವೆ ಮಾಡುವುದು?. ಅದರಲ್ಲೂ ಕೆಳವರ್ಗ ಮತ್ತು ಮಧ್ಯಮ ವರ್ಗದವರು ಮಗಳು ಹುಟ್ಟಿದಾಗಿನಿಂದ ಮದುವೆ ಮಾಡುವ ತನಕ ಹಣ ಕೂಡಿಡುವ ಬಗ್ಗೆ, ಆಗಸದಷ್ಟು ಎತ್ತರದಲ್ಲಿರುವ ಚಿನ್ನದ ಬೆಲೆಯ ಬಗ್ಗೆ ಚಿಂತೆ ಒಂದು ಕಡೆ ಆದರೆ ಈ ಸಮಾಜಕ್ಕೆ ಕಾಲೆಳೆಯುವ ಚಿಂತೆ. ಮಗಳು ಮದುವೆಯ ವಯಸ್ಸಿಗೆ ಬಂದರೆ ಸಾಕು ಈ ಸಮಾಜ ಪದೇ ಪದೇ ಹುಡುಗಿಯ ಹೆತ್ತವರಿಗೆ ಯಾವಾಗ ಮದುವೆ? ಎಲ್ಲಿ ಮದುವೆ? ಎಷ್ಟು ಪವನ್ ಚಿನ್ನ ಮಾಡಿಸಿದ್ದೀರಾ? ಎಷ್ಟು ಜನರಿಗೆ ಊಟ ಹಾಕಿಸ್ತಿರಿ? ಊಟ ಸಸ್ಯಾಹಾರಿನ ಮಾಂಸಾಹಾರಿನ? ಎಂದು ಕಳೆಯುತ್ತಾರೆ.

ಅಷ್ಟಕ್ಕೇ ಜನ ಸುಮ್ನಾನಗುತ್ತಾರೆ ಅನ್ಕೊಂಡ್ರ ಇಲ್ಲಪ್ಪಾ ಮದುವೆ ದಿನ ಹೊಟ್ಟೆ ಬಿರಿಯುವಷ್ಟು ಊಟ ಮಾಡಿ ಬಂದು ಹೇಳುವುದು ಊಟ ಅನ್ಕೊಂದಷ್ಟು ಚೆನ್ನಾಗಿರಲಿಲ್ಲ, ಭಕ್ಷ್ಯ ಕಡಿಮೆ ಆಯ್ತು, ಹುಡುಗಿಗೆ ಚಿನ್ನ ಹಾಕಿದ್ದು ಕಡಿಮೆ ಆಯ್ತು. ಇವರಿಗೇನು ಗೊತ್ತು ಪಾಪ ಮದುವೆ ಮಾಡಲು ಹೆತ್ತವರು ಎಷ್ಟು ಸಾಲ  ಮಾಡಿದ್ದಾರೆ ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು.

ಇವರಿಗೂ ಆ ಪರಿಸ್ಥಿತಿ ಎದುರಾದರೆ ಅರ್ಥವಾಗಬಹುದೇನೋ? ಮದುವೆ ಮಾಡಿ ಮುಗಿಸಿದ ಮೇಲೂ ಹೆತ್ತವರಿಗೆ ತಲೆ ನೋವು ತಪ್ಪಿದ್ದಲ್ಲ, ಜೋಡಿ ಅಂನ್ಯೋನ್ಯವಾಗಿದ್ದರೆ ಒಳ್ಳೆಯದೇ, ಆದರೆ ಅದೇ ಏನಾದರೂ ವರದಕ್ಷಿಣೆ ಕೊಟ್ಟದ್ದು ಕಡಿಮೆ ಆಯ್ತು, ನಾವು ಯೋಚಿಸಿದಷ್ಟು ಚಿನ್ನ ಹಾಕಿಲ್ಲ ಎಂದು ತಕರಾರು ಎತ್ತಿ ಹುಡಿಗಿಯನ್ನು ತವರು ಮನೆಗೆ ಅಟ್ಟಿದರೆ ಮತ್ತೆ ಪುನಃ ಈ ಸಮಾಜ ಹೆತ್ತವರ ಕಡೆ ಬೆರಳು ತೋರಿಸುತ್ತದೆ. ಒಂದು ಕಡೆ ಮಗಳ ಮದುವೆಗೆ ಮಾಡಿದ ಸಾಲ ಇನ್ನೊಂದು ಕಡೆ ಈ ಸಮಾಜ ಕೊನೆಗೆ ತಲೆಗೆ ಬರುವುದು ಜೀವ ಕಳೆದುಕೊಳ್ಳುವುದೇ ಉಳಿದಿರುವ ಪರಿಹಾರ ಎಂದು. ನಿಜವಾಗಿಯೂ ಹೆತ್ತವರು ಹೆದರುವುದು ಮದುವೆಗೆ ಅಲ್ಲ ಈ ರಾಕ್ಷಸ ಸಮಾಜಕ್ಕೆ...


        ಮದುವೆಯ ವಿಚಾರಕ್ಕೆ ಬಂದಾಗ ಈ Lockdown ಸಮಯದಲ್ಲಿ ಅದೆಷ್ಟೋ ಸರಳವಾಗಿ ನಡೆಯುತ್ತಿದೆ. ಒಂದು ಕಡೆ ಮದುವೆಯ ಖರ್ಚು ಕಡಿಮೆಯಾಗುತ್ತೇ ಮತ್ತೊಂದು ಕಡೆಯಲ್ಲಿ ಹೆತ್ತವರು ಸಾಲಾಗರರಾಗುವುದು ತಪ್ಪುತ್ತೆ. ಮದುವೆಯಾದ ಮೇಲೆ ಗಂಡು ಹೆಣ್ಣು ಅನ್ಯೋನ್ಯವಾಗಿರುವುದು ಮುಖ್ಯವೇ ಹೊರತು ವಿಜೃಂಭಣೆಯ ಮದುವೆ ಅಲ್ಲ ಎಂಬುದು ನನ್ನ ಅನಿಸಿಕೆ..


ಕಾರ್ತಿಕ್ ನಾಯಕ್
ಉಪನ್ಯಾಸಕರು
ಮಿಲಾಗ್ರಿಸ್ ಕಾಲೇಜು
ಕಲ್ಯಾಣಪುರ


Post a comment

1 Comments