ಯಾರು ನಮ್ಮವರು ?

 ಯಾರು ನಮ್ಮವರು ?
ಬದುಕು ಎಷ್ಟೇ ಭಾರವಾದರೂ ಬದುಕೋಕೆ ಆಸೆ ಪಡ್ತೀವಿ ಯಾಕೆಂದರೆ ನಮಗಾಗಿ ಅಲ್ಲ ನಮ್ಮವರಿಗಾಗಿ ಹಾಗಾದರೆ ನಮಗೆ ಅನ್ನುವ ಒಂದು ಬದುಕು ಇಲ್ಲವೇ?   ನಾವು ಹುಟ್ಟಿದಾಗಿನಿಂದ  ವಯಸ್ಸಿಗೆ ಬರುವ ತನಕ ನಾವು  ಒಂಟಿಯಾಗಿಯೆ ಹೆಜ್ಜೆ ಇಡುತ್ತೇವೆ ನಂತರ ಜೀವನದಲ್ಲಿ ಹಲವಾರು ಮುಖಗಳ ಪರಿಚಯವಾಗುತ್ತದೆ. ಅವರೊಂದಿಗೆ ನಮ್ಮ ಬಾಂಧ್ಯವ್ಯವು ಬೆರೆತಿರುತ್ತದೆ ಎಲ್ಲಿಯ  ತನಕ ಅಂದರೆ ನಾವು ನಮಗೆ ಕೊಡುವ ಪ್ರಾಮುಖ್ಯ ಕ್ಕಿಂತ ಅವರಿಗೆ ಕೊಟ್ಟಿರುತ್ತೇವೆ.ಏಕೆಂದರೆ ನಮ್ಮ ಅವರ ನಡುವೆ ಇರುವ ನಂಟು  ಕೊನೆತನಕ ಉಳಿಯಲಿಅನ್ನುವ ಆಸೆ .  ಎಲ್ಲಕ್ಕಿಂತ ಹೆಚ್ಚಾಗಿ ಅವರು ನಮ್ಮವರು ಅನ್ನುವ ಗಾಢವಾದ ಮನಸ್ಥಿತಿ ಜೊತೆಗೆ ಬದುಕನ್ನು ಸಾಗಿಸುತ್ತೆವೆ.
ನಾವು ಯಾವಾಗ  ಜೀವನದಲ್ಲಿ ಎಡವಿ ಬೀಳುತ್ತೇವೊ, ಸೋಲುತ್ತೇವೊ ,ಎಲ್ಲವನ್ನು ಕಳೆದುಕೊಂಡಿರುತ್ತೆವೊ, ಆವಾಗ ನಿಜವಾದ ನಮ್ಮವರು ಕಾಣಲು ಸಿಗುತ್ತಾರೆ .
ನಮ್ಮ ಬಳಿ ಎಲ್ಲವೂ ಇದ್ದಾಗ ನಮ್ಮವರು ಅನ್ನುತ್ತಾರೆ, ಏನು ಇಲ್ಲದೆ ಹೋದಾಗ ನೀನು ಯಾರು ಎಂದು ಕೇಳುತ್ತಾರೆ .ಹಾಗಾದರೆ ಯಾರು ನಮ್ಮವರು? ತಮಗೇ ಬೇಕಾದಾಗ ಬರುವವರನ್ನು ನಮ್ಮವರು ಅಂತ ಕರೀಬೇಕಾ ?ಕಷ್ಟ ನೋಡಿ ನಗುವವರನ್ನು ನಮ್ಮವರು  ಅಂತ ಕರೀಬೇಕಾ ?ನಾವು ಬಾಂಧವ್ಯ ಅನ್ನುವ  ಪಂಚಾಂಗವನ್ನು ಕಟ್ಟಿ, ಅದಕ್ಕೆ ಪ್ರೀತಿ ಎಂಬ ನೀರನ್ನು ದಾರೆ ಎಳೆದು,  ನಂಬಿಕೆ ಎನ್ನುವ ಗೋಡೆಯನ್ನು ಕಟ್ಟಿ, ಸುಂದರವಾದ ಸಂಬಂಧ ಅನ್ನುವ ಮನೆಯನ್ನು ಕಟ್ಟಿ ಅಲ್ಲಿ ನಮ್ಮವರ ಹೃದಯಗಳನ್ನು  ಭದ್ರವಾಗಿರುತ್ತದೆ ಎಂಬ ಭರವಸೆಯನ್ನು ಇಟ್ಟುಕೊಂಡು, ಕೋನೆಗೆ  ಆ ಮನೆ ಕುಸಿದು ಬಿದ್ದಾಗ ಯಾರು ನಮ್ಮವರು ಎಂದು ಪ್ರಶ್ನೆ ಕಾಡುತ್ತದೆ .

ಈ ಬದುಕಿನ ಪಯಣದಲ್ಲಿ ಯಾರೂ ಶಾಶ್ವತ ಅಲ್ಲ ಯಾವುದೂ ಶಾಶ್ವತ ಅಲ್ಲ ,ಹಾಗಿದ್ದಾಗ ನಮ್ಮವರು ಶಾಶ್ವತವೆ ? ಯಾರು ನಮ್ಮವರಲ್ಲ ನಮಗೆ ನಾವೇ ನಮ್ಮವರು .ಅದುವೇ ನಿಜವಾದ ಜೀವನ. ಎಷ್ಟೇ ಕಷ್ಟ ಬರಲಿ ನೋವು ಇರಲಿ, ನಮ್ಮ ಜೊತೆ ಇರುವುದು ನಾವೇ  ಮತ್ತು ನಮ್ಮ ಆತ್ಮವಿಶ್ವಾಸ .ಉಳಿದವರು ಹೆಸರು ಕೀರ್ತಿ  ಪ್ರತಿಷ್ಠೆಗಷ್ಟೇ  .ಜನರು ತಮಗೆ ಉಪಯೋಗ ಬಿದ್ದಾಗ ಮಾತ್ರ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಅಂತ ಬೇಸರ ಮಾಡಬಾರದು ಏಕೆಂದರೆ ಕತ್ತಲೆಯಾದಾಗ ಮಾತ್ರ ಬೆಳಕು ಹುಡುಕುತ್ತೇವೆ .ಜನನದ  ಸಮಯದಲ್ಲಿ ನಾವು ಒಬ್ಬರು ಮರಣದ ಸಮಯದಲ್ಲಿ ನಾವು ಒಬ್ಬರು ಇವೆರಡರ ನಡುವಿನ  ಜೀವಿಸುವ  ಸಮಯದಲ್ಲಿ ಅನೇಕರು ಹಾಗಾದರೆ ಇಲ್ಲಿ ಯಾರು ನಮ್ಮವರು ...


ರೋಶನಿ
ಮಿಲಾಗ್ರಿಸ್ ಕಾಲೇಜ್
ಕಲ್ಯಾಣಪುರ .

Post a comment

0 Comments